ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಹಿರಿಯ ಕಲಾವಿದನಿಗೆ ಸನ್ಮಾನ, ನತ್ಯ ಪ್ರದರ್ಶನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 30 , 2014
ಜನವರಿ 30, 2014

ಹಿರಿಯ ಕಲಾವಿದನಿಗೆ ಸನ್ಮಾನ, ನತ್ಯ ಪ್ರದರ್ಶನ

ಶಿರಸಿ : ಯಕ್ಷಗಾನದ ಮೇರು ನಟ ನಾರಾಯಣ ಹಾಸ್ಯಗಾರ ಕರ್ಕಿ ಅವರಿಗೆ ಸನ್ಮಾನ, ನತ್ಯ ವಿದ್ವತ್ ತೇರ್ಗಡೆಯಾದ ಯುವ ಕಲಾವಿದರಿಗೆ ಪುರಸ್ಕಾರ, ನತ್ಯ ರೂಪಕ ಪ್ರದರ್ಶನ, ವಿದ್ವತ್ ವಿದ್ಯಾರ್ಥಿಗಳ ಚಾರಿಗಳ ಪ್ರಯೋಗದೊಂದಿಗೆ ಇಲ್ಲಿಯ ನಟರಾಜ ನತ್ಯ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಭಾಗದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳಿಗೆ ನಟರಾಜ ನತ್ಯಶಾಲೆಯ ಮೂಲಕ ನತ್ಯಾಭ್ಯಾಸ ಮಾಡುತ್ತ ಬಂದಿದ್ದು ಶ್ರೀಪಾದ ಹೆಗಡೆ ಕಡವೆ ಕಲ್ಯಾಣ ಮಂಟಪದಲ್ಲಿ ವಾರ್ಷಿಕೋತ್ಸವ ಸಮಾರಂಭ ಏರ್ಪಾಟಾಗಿತ್ತು. ನತ್ಯಾಭ್ಯಾಸಿ ಹಿರಿಕಿರಿಯ ವಿದ್ಯಾರ್ಥಿ ಸಮೂಹವು ನಾಟ್ಯದ ವರ್ಣಮಯ ವೇಷಭೂಷಣಗಳೊಂದಿಗೆ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದು ಸಡಗರದ ವಾತಾವರಣ ಸಷ್ಟಿಸಿತ್ತು. ಪಾಲಕರೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು ಕಿರಿಯ ಹಾಗೂ ಯುವ ವಿದ್ಯಾರ್ಥಿಗಳ ನತ್ಯಾಭ್ಯಾಸದ ಪ್ರಗತಿಯನ್ನು ವೀಕ್ಷಿಸಿದರು.

ಸನ್ಮಾನ ಸ್ವೀಕರಿಸಿದ ಹಿರಿಯ ಕಲಾವಿದ ನಾರಾಯಣ ಹಾಸ್ಯಗಾರ ಮಾತನಾಡಿ, ಇಂದಿನ ಯುವಜನಾಂಗ ಭರತನಾಟ್ಯ ಶಾಸ್ತ್ರವನ್ನು ಆಧರಿಸಿ ನತ್ಯ ಮಾಡಬೇಕು. ಅದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗುತ್ತದೆ ಎಂದರು. ಯಕ್ಷಗಾನ ಕಲಾವಿದನಾಗಿ ಮನದಣಿಯೇ ಕುಣಿದಿದ್ದೇನೆ. ಈಗಲೂ ಕುಣಿಯಬೇಕೆಂಬ ಅಪೇಕ್ಷೆ ಹಲವರದಾಗಿದೆ. ಇನ್ನೊಂದು ಪ್ರಸಂಗದಲ್ಲಿ ಕುಣಿತ ಪ್ರದರ್ಶಿಸಿ ಕಲಾಪ್ರದರ್ಶನದ ಬದುಕಿಗೆ ಮಂಗಲ ಹಾಡುವ ಇಚ್ಚೆಯಿದೆ ಎಂದರು. ಪತ್ರಕರ್ತ ಅಶೋಕ ಹಾಸ್ಯಗಾರ ಅತಿಥಿಯಾಗಿ ಪಾಲ್ಗೊಂಡಿದ್ದರು. ಭರತನಾಟ್ಯಕ್ಕೂ ಯಕ್ಷಗಾನಕ್ಕು ಅನ್ಯೋನ್ಯ ಸಂಬಂಧವಿದೆ ಎಂದು ವಿವರಿಸಿದರು.

ನಟರಾಜ ನತ್ಯ ಶಾಲೆಯ ಗುರು, ನಾಟ್ಯ ವಿದುಷಿ ಸೀಮಾ ಭಾಗವತ ಉಪಸ್ಥಿತರಿದ್ದರು. ಅವರ ನಿರ್ದೇಶನದಲ್ಲಿ ವಿದ್ಯಾರ್ಥಿ ಕಲಾವಿದರು ನಾನಾ ನತ್ಯ ಬಂಧಗಳನ್ನು ಪ್ರದರ್ಶಿಸಿದರು. ಶ್ರೀಕಷ್ಣ ಲೀಲಾಮತ್ ನತ್ಯರೂಪಕ ಸೊಗಸಾಗಿ ಮೂಡಿ ಬಂತು. ವಿದ್ವತ್ ಕಲಾವಿದರು ನತ್ಯದಲ್ಲಿ ಭೂಮಿ ಮತ್ತು ಆಕಾಶ ಚಾರಿಗಳನ್ನು ಇದೇ ಮೊದಲ ಬಾರಿಗೆ ಪ್ರಯೋಗಿಸಿ ಗಮನ ಸೆಳೆದರು. ಸಿಂಧೂ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ನತ್ಯ ಶಾಲೆ ಮುಖ್ಯಸ್ಥ ಪ್ರದೀಪ ಭಾಗವತ ನಿರೂಪಿಸಿದರು.

ಕೃಪೆ : http://www.vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ